ಒಂದು ಮಳೆಗಾಲದ ಮುಸ್ಸಂಜೆಯ ಘಳಿಗೆ...........
ಮನಸ್ಸು ತುಂಬಾ ಭಾರವಾಗಿತ್ತು. ಮನೆಯ ಹೊರಾಂಗಣದಲ್ಲಿ ಕುರ್ಚಿ ಹಾಕಿ ಕೂತಿದ್ದೆ. ಮನಸ್ಸು ಹಗುರವಾಗಲು ಕಾತುರ. ಆ ಹಸಿರಿನ ಮಡಿಲಲ್ಲಿ ಕುಳಿತಾಗ ಮನಸ್ಸು,ಹೃದಯ ಕಾಲಿಗೆ ಕಟ್ಟ ಚಕ್ರದಂತೆ ಹಿಂದೆ ಮುಂದೆ ಹರಿದಾಡಿತು. ಹಾಗೆಯೇ ಅದನ್ನೇಕೆ ಪುಟದಲ್ಲಿ ಅಚ್ಚಿಡಬಾರದೆಂಬ ಬಯಕೆ. ಅದಕ್ಕೆ ಈ ಪ್ರಯತ್ನ.:-)
ಸರಿ..
ಮನಸ್ಸು ನೀರಸವಾಗಿ ಆಕಾಶದತ್ತ ಶೂನ್ಯ ದೃಷ್ಟಿ ನೆಟ್ಟಿತ್ತು. ಕಪ್ಪು ಮೋಡಗಳು ನಿಧಾನವಾಗಿ ವಿದಾಯದ ಸಂಕೇತವಾಗಿ ಹೋಗುತ್ತಿರುವಂತೆ ಭಾಸವಾಯಿತು. ಮೋಡದಲ್ಲಿ ಹುದುಗಿದ ನೀರಿನ ಹನಿಗಳು ಭೂಮಿಗೆ ಬರುವ ಆತುರತೆ ಕಾಣತೊಡಗಿತು. ಭೂಮಿಯು ನವೋಲ್ಲಾಸದ ಸಂಭ್ರಮಕ್ಕೆ ಕಾಯುತ್ತಿರುವಂತೆ ಮನದಲ್ಲೂ ಸಹ ಖುಷಿಯ ರೇಖೆಗಳು ಮೂಡತೊಡಗಿದವು.
ಪ್ರಕೃತಿ ನೋಡಿ ಯಾರೋ ಒಬ್ಬ ಕವಿತೆ ಬರೆದನಂತೆ.ಈ ಪ್ರ ಕೃತಿ ನನ್ನ ಮನದಲ್ಲು ಏನೇನೋ ಮೋಡಿ ಮಾಡಿ ಮನಸಿನ ಏಕಾಂತಕ್ಕೆ ಸಾಥ್ ನೀಡಿತು.
ಮುಗ್ದ್ಜ ಮನಸ್ಸು ಫ್ರೌಢತೆಯ ಮೆಟ್ಟಿಲು ಏರುವ ತವಕ.ಆ ಕಿಲಕಿಲ ನಗು ಮುಗುಳ್ನಗೆಯಾಗಿ ಪರಿವರ್ತನೆ ಆಗುತ್ತ ಇದೆ...
ಎಷ್ಟೊಂದು ವ್ಯತ್ಯಾಸ....:-)
ಮನಸ್ಸಿನ ಏಕಾಂತಕ್ಕೆ ಮುಕ್ತಿ ಸಿಕ್ಕಿ ,ಅಪ್ಪ ಅಮ್ಮ ತಂಗಿಯರೊಡನೆ ಸಮಯ ಕಳೆಯಲು ಹಜಾರಕ್ಕೆ ಬಂದೆ.......
ಸೀಮಾ ...
ReplyDeleteಚೊಲೋ ಬರದ್ದೆ ...ಹೀಂಗೆ ಬರೀತಾ ಇರು ...
ತುಂಬಾ ಚೆನ್ನಾಗಿದೆ.. ಇದನ್ನು ಮುಂದುವರೆಸಿ ಒಂದು ಸುಂದರ ಕಥೆಯನ್ನಾಗಿ ಮಾಡಲು ಪ್ರಯತ್ನಿಸಿ.. ಶುಭ ಕೋರುತ್ತಾ ಮನಸ್ಪೂರ್ವಕ ವಂದನೆಗಳು.. :)
ReplyDelete